Bombe Helutaite Song Lyrics in Kannada
ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೆ ರಾಜಕುಮಾರ
ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೆ ರಾಜಕುಮಾರ
ಹೊಸಬೆಳಕೊಂದೂ
ಹೊಸಿಲಿಗೆ ಬಂದೂ
ಬೆಳಗಿದೆ ನಮ್ಮಾ ಮನಗಳ ಇಂದೂ
ಆರಾಧಿಸೋ ರಾರಾಜಿಸೋ ರಾಜರತ್ನನು
ಆಡಿಸಿಯೇ ನೋಡು ಬೀಳಿಸಿಯೇ ನೋಡು
ಎಂದೂ ಸೋಲದು
ಸೋತು ತಲೆಯ ಬಾಗದು
ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೆ ರಾಜಕುಮಾರ
ಗುಡಿಸಲೇ ಆಗಲಿ ಅರಮನೆ ಆಗಲಿ
ಆಟವು ನಿಲ್ಲದು
ಎಂದೂ ಆಟ ನಿಲ್ಲದು
ಹಿರಿಯರೇ ಇರಲಿ ಕಿರಿಯರೆ ಬರಲಿ
ಬೇಧವ ತೋರದು
ಎಂದೂ ಬೇಧ ತೋರದು
ಎಲ್ಲ ಇದ್ದು ಏನೂ ಇಲ್ಲದ ಹಾಗೆ ಬದುಕಿರುವ
ಆಕಾಶ ನೋಡದ ಕೈಯೇ ನಿನದು
ಪ್ರೀತಿ ಹಂಚಿರುವ
ಜೊತೆಗಿರೆ ನೀನೂ
ಅಪ್ಪನ ಹಾಗೆ
ಹಣ್ಣೆಲೆ ಕಾಯೋ
ವಿನಯದಿ ಹೀಗೆ
ನಿನ್ನನು ಪಡೆದ ನಾವು ಪುನೀತ
ಬಾಳು ನಗುನಗುತಾ
ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೆ ರಾಜಕುಮಾರ
ತಾನೇ ಉರಿದು ಮನೆಗೆ ಬೆಳಕು
ಕೊಡುವಾ ದೀಪವಿದು
ನಂದಾ ದೀಪವೇ ಇದು
ಆಡಿಸುವಾತನ ಕರುಣೆಯ ಮೇಲೆ ನಮ್ಮಾ ಪಾತ್ರವು
ಸಮಯದ ಸೂತ್ರ ಅವನದು
ಒಂದು ಮುತ್ತಿನ ಕಥೆಯ ಹೇಳಿತು ಈ ಬೊಂಬೆ
ಆ ಕಥೆಯಲ್ಲಿಲ್ಲದ ರಾಜನ್ಹ ಂಗೆ ನೀನು ಬಂದೆ
ಯೋಗವು ಒಮ್ಮೆ ಬರುವುದು ನಮಗೆ
ಯೋಗ್ಯತೆ ಒಂದೇ ಉಳಿವುದು ಕೊನೆಗೆ
ಸೂರ್ಯನೊಬ್ಬ ಚಂದ್ರನೊಬ್ಬ
ರಾಜನೂ ಒಬ್ಬ
ಈ ರಾಜನು ಒಬ್ಬ
ಆಡಿಸಿಯೇ ನೋಡು ಬೀಳಿಸಿಯೇ ನೋಡು
ಎಂದು ಸೋಲದು
ಸೋತು ತಲೆಯ ಬಾಗದು
ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೆ ರಾಜಕುಮಾರ